Latest News & e-Newsletter

Veerasaiva Vidyavardhaka Sangha's 

Smt. Allum Sumangalamma Memorial College for Women, Ballari. 

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970. 

Recognized under sections 2(f) and 12(B) of the UGC Act 1956.

(Accredited by NAAC in IV Cycle) 

Internal Quality Assurance Cell (IQAC)

Admission Committee

Degree Admissions open for the Academic Year 2026-27
 
 

U.G. & P.G. Programmes offered

 B.A., B.Sc., B.Com., B.B.A., B.C.A., &  M.Com.,

https://www.facebook.com/share/p/1Mo4o7jd5A/ 

wsbanner

https://www.facebook.com/share/p/1AfbkLMK53/

The Bharat Scouts & Guides Rangers Unit activity in association with Smt. Allum Sumangalamma Rangers Unit

The Bharat Scouts & Guides Rangers Unit activity was held on 04.07.2026 @ Seminar Hall.

bsjul26act bsact july26

 Social Media Web link of this event --> https://www.facebook.com/share/p/1B5BQks5pF/

bsjuly26actg bsjuly26actgr

ದಿನಾಂಕ:04.07.2026 ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಬಳ್ಳಾರಿ ಮತ್ತು ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ, ಬಳ್ಳಾರಿ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಇವರ ಸಂಯುಕ್ತ ಆಶ್ರಯದಲ್ಲಿ ಪದವಿ ಹಾಗೂ ಪದವಿ ಪೂರ್ವ ಉಪನ್ಯಾಸಕರಿಗೆ ಒಂದು ದಿನದ ಪ್ರಾರಂಭಿಕ ಶಿಬಿರ ಮತ್ತು ರೋವರ್ ಸ್ಕೌಟ್ ಲೀಡರ್ ಮತ್ತು ರೇಂಜರ್ಸ್ ಲೀಡರ್ಗಳ ಒಂದು ದಿನದ ಕಾರ್ಯಗಾರವನ್ನು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಲೈಬ್ರರಿ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ.ಕುಪ್ಪಗಲ್ ವೀರೇಶ್ ಜಿಲ್ಲಾ ಸ್ಕೌಟ್ಸ್ ಆಯುಕ್ತರು, ಶ್ರೀಮತಿ ಕಾತ್ಯಾಯಿನಿ ಎಂ ಮರಿದೇವಯ್ಯ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀಮತಿ ಅಲ್ಲಮ್ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ, ಎಎಸ್ ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಧೂಪಂ ಸತೀಶ್, ಬಳ್ಳಾರಿ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿಗಳಾದ ಶ್ರೀ ವಿಜಯ ಸಿಂಹ, ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀ ಎಂ ನಾಗರಾಜ್, ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಸ್ಥಾನಿಕ ಆಯುಕ್ತರಾದ ಶ್ರೀ ಅನಂತ್ ಕುಮಾರ್ ಶೆಟ್ಟಿ, ರೋವರ್ ಸ್ಕೌಟ್ಸ್ ಲೀಡರ್ ಆದ ಶ್ರೀ ಚಂದ್ರಶೇಖರ್ ರೆಡ್ಡಿ, ರೇಂಜರ್ ಲೀಡರ್ ಆದ ಡಾ.ಮಂಗಳ ಬಿ.ಎನ್., ಜಿಲ್ಲಾ ಸಂಘಟಕರಾದ ಮಹಮ್ಮದ್ ಶರ್ಫುದ್ದೀನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಡಾ. ಕುಪ್ಪಗಲ್ ವೀರೇಶ್ ಅವರು ವಹಿಸಿದ್ದರು, ಹಾಗೆಯೇ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಧೂಪಂ ಸತೀಶ್, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಗೋವಿಂದರಾಜ್ ಬಿ ಮತ್ತು ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀವಿಜಯ ಸಿಂಹ , ಶ್ರೀ ಶಶಿಧರ್ ಕೆಲ್ಲೂರ್ ರೋವರ್ ರೇಂಜರ್ ನೂಡಲ್ ಆಫೀಸರ್, ದಹಿಕ ನಿರ್ದೇಶಕರಾದ ಅಶೋಕ್ ಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಚಂದ್ರಶೇಖರ್ ರೆಡ್ಡಿ, ಡಾಕ್ಟರ್ ಮಂಗಳ ಬಿಎನ್, ಶ್ರೀ ಶಂಭುನಾಥ, ಶ್ರೀ ಎಂ ನಾಗರಾಜ್ ಅವರು ಕಾರ್ಯನಿರ್ವಹಿಸಿದರು. ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ನಿಯಮಾವಳಿಯ ಅನುಸಾರ ಪ್ರಾರ್ಥನಾ ಗೀತೆ ಧ್ವಜಾರೋಹಣ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಯ ಮೇಲಿರುವ ಗಣ್ಯರೆಲ್ಲಾ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕ ನುಡಿಯನ್ನು ಶ್ರೀ ಎಂ ನಾಗರಾಜ್ ಅವರು ನುಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಧೂಪಂ ಸತೀಶ್ ಅವರು ಮಹಾವಿದ್ಯಾಲಯದ ರೇಂಜರ್ ಘಟಕದ ಕಾರ್ಯವನ್ನು ಶ್ಲಾಘಿಸಿದರು ಮತ್ತು ರೋವರ್ ಮತ್ತು ರೇಂಜರ್ ನ ಮಹತ್ವವನ್ನ ಉಪನ್ಯಾಸಕರಿಗೆ ತಿಳಿಸಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ ಮರಿದೇವಯ್ಯ ಅವರು ಹೊಸದಾಗಿ ಭಾಗಿಯಾದ ರೇಂಜರ್ ಲೀಡರ್ ಮತ್ತು ರೋವರ್ ಲೀಡರ್ ಅವರಿಗೆ ಶುಭಾಶಯಗಳು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ ಡಾ. ವೀರೇಶ್ ಅವರು ರೋವರ್ ರೇಂಜರ್ ಎಂದರೇನು? ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಈ ಘಟಕಗಳ ಅವಶ್ಯಕತೆ ಕುರಿತು ಎಲ್ಲಾ ಉಪನ್ಯಾಸಕರಿಗೆ ಮಾಹಿತಿ ನೀಡಿದರು. ಕಾರ್ಯಗಾರದ ನಂತರ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಉಪನ್ಯಾಸಕರಿಗೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದರಾಜ್ ಬಿ ಅವರುಪ್ರಮಾಣ ಪತ್ರವನ್ನು ವಿತರಿಸಿದರು ಮತ್ತು ಕಾರ್ಯಕ್ರಮದ ನಿರೂಪಣೆ ಸ್ವಾಗತ ವನ್ನು ಡಾ. ಮಂಗಳ ಬಿ ಎನ್ ಅವರು ನಿರ್ವಹಿಸಿದ್ದರುಶ್ರೀ ಶಂಬುನಾಥ್ ಇವರು ವಂದನಾರ್ಪಣೆಯನ್ನು ನೆರವೇರಿಸಿದರು.

wsbs2 wsbs1

 Please click on the following web link for the --> Workshop Report

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com