Latest News & e-Newsletter

V.V.Sangha's

Smt. A.S.M. College for Women, Ballari. (Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12(B) of the UGC Act 1956

(Accredited by NAAC in IV Cycle) 

Internal Quality Assurance Cell (IQAC)

Cultural Association conducted "Dasara Sambhrama-2025" Festival activity &

Ethnic Day in assocation with Students Union on 29.09.2025 @ Auditorium 

Social Media Web link --> https://www.facebook.com/share/p/19fpLwmpKc/

Please click on the following web link for the --> Report

701522b2 8c86 41c1 9bfe af9ee4e6bd42 b11bbca5 e3e0 4eb6 8673 0ad29aa5ed2c

 

8525049a 89de 4ea3 b39e de0c263aa92c 1d84dc37 13c4 40d1 bf91 392ba9755fab

ದಿನಾಂಕ:29-09-2025ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, "ಸಾಂಸ್ಕೃತಿಕ ಸಂಘ"ದ ಅಡಿಯಲ್ಲಿ ದಸರಾ ಸಂಭ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯರವರು ವಹಿಸಿಕೊಂಡಿದ್ದರು. ದಸರಾ ಸಂಭ್ರಮದ ಪೂಜಾ ಕಾರ್ಯಕ್ರಮ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬಕ್ಕೆ ವಿಶೇಷವಾದ ಸ್ಥಾನಮಾನ ಇದೆ. ದುರ್ಗಾ ಮಾತೆಯು ಅಸುರರನ್ನು ಕೊಲ್ಲುವುದಕ್ಕಾಗಿ ಒಂಬತ್ತು ರೂಪಗಳನ್ನು ತಾಳಿ, ಜಗತ್ತನ್ನು ರಕ್ಷಿಸಿದಳು ಎಂಬುದನ್ನು ಪುರಾಣ ಮತ್ತು ಮಹಾಕಾವ್ಯಗಳಿಂದ ತಿಳಿದು ಬರುತ್ತದೆ. ಇಂತಹ ಮಹತ್ವಪೂರ್ಣವಾದ ದಸರಾ ಹಬ್ಬವನ್ನು ನಮ್ಮ ಮಹಾವಿದ್ಯಾಲಯದಲ್ಲಿ ಆಚರಿಸುತ್ತಿರುವುದು ಹರ್ಷದಾಯಕವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಸನ್ಮಾನ್ಯ ಶ್ರೀ ಜಿ.ಎo. ಪರ್ವತೀಶ ರವರು, ಶ್ರೀಮತಿ ಜಿ.ಎಸ್ ಸರ್ವಮಂಗಳ ರವರು, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೂಪಂ ಸತೀಶ್ ರವರು, IQAC ಸಂಯೋಜಕರಾದ ಡಾ. ಸಯಿದ ಕೆ. ತನ್ವೀರ್ ರವರು, ಸಹ ಸಂಯೋಜಕರಾದ ಡಾ. ಭೀಮನಗೌಡ ಪಾಟೀಲ ರವರು, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಡಾ. ಸುವರ್ಣಮ್ಮ ಡಿ, ಸದಸ್ಯರಾದ ಡಾ. ಕೆ.ಗಂಗಾಧರ, ಡಾ. ಕೆ. ಅನುಪಮ, ಶ್ರೀಮತಿ ವೈ ಪೂರ್ಣಿಮಾ, ಶ್ರೀಮತಿ ಇಸ್ವಿ ಸೌಮ್ಯ, ಮಮತಾ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಗಳಾದ B.com 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಆರ್. ನಯನ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಬಿ.ಎ ವಿಭಾಗದ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಕೆ.ಎo ಚೈತನ್ಯ ರವರು ದಸರಾ ಹಬ್ಬದ ಮಹತ್ವವನ್ನು ಕುರಿತು ಮಾತನಾಡಿದರು. ಬಿ.ಎ ವಿಭಾಗದ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಸಿಂಧೂಜ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಮಹಾವಿದ್ಯಾಲಯದ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಆರೋಗ್ಯ, ಐಶ್ವರ್ಯ, ಶ್ರೀಮಂತಿಕೆಯ ಸಂಕೇತವಾದ ಬನ್ನಿ ಕೊಡುವುದರ ಮೂಲಕ ಹರ್ಷವನ್ನು ವ್ಯಕ್ತಪಡಿಸಿದರು. ಹಾಗೆಯೇ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ, ವಿವಿಧ ಬಗೆಯ ನೃತ್ಯಗಳನ್ನು ಪ್ರದರ್ಶನ ಮಾಡಿದರು. ದಸರಾ ಸಂಭ್ರಮ ಮುಗಿದ ಮೇಲೆ ಮಹಾವಿದ್ಯಾಲಯದಲ್ಲಿ ETHNIC DAY ಅನ್ನು ಭಾರತ ದೇಶದ ವಿವಿಧ ಬಗೆಯ ಉಡುಪುಗಳನ್ನು ಧರಿಸಿ ಆಚರಿಸಲಾಯಿತು.

37aeae2f 1a9b 4b57 8557 34075a80c915 152cca86 1461 432c 8395 f002d9f859f8

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com