Latest News & e-Newsletter

V.V.Sangha's

Smt. A.S.M. College for Women, Ballari. (Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12(B) of the UGC Act 1956

(Accredited by NAAC in IV Cycle) 

Internal Quality Assurance Cell (IQAC)

History, NSS & Rangers Unit acitivty

Hyderabad-Karnataka Liberation Day (Vimochana Diwas) celebrated @ Open Air Theatre of Smt.ASM College for Women, Ballari.

Social Media Web link --> https://www.facebook.com/share/p/1FDriwbmcm/

"Happy Kalyana Karnataka Liberation Day" - 17.09.2025
 
Please click on the following web link for the --> Report 
 
 56033050 483f 4291 b4b6 96a8cc038531 32180511 b91a 42b6 b2b0 54c9a46b0efc
 
 
Kalyana Karnataka Liberation Day was celebrated on 17.09.2025 @ Open Air Theatre of Smt.ASM College for Women, Ballari. 
 bf43b1f3 f099 4f26 9869 7d337b1a1d7f  df8349a4 0d74 41b1 a4ba d4f28121da80
College Governing Council Chairperson Smt.KATHYAYINI.M.MARIDEVAIAH, Principals Dr.D.Satheesh & Dr.B.Govindaraju, History Department Head, Sri.Ramalinga, Rangers Unit Officer Dr.MANGALA.B.N., Botany Department Head Dr.Bheemanagouda Patil, NSS Units Officers, various Heads of Departments, Physical Education Director Sri.Ashok, Staff & Students participated on occasion.
 
d8e68758 98ac 4744 8194 4a62c03b6443 1
 
"ಸರ್ವರಿಗೂ ಕಲ್ಯಾಣ ಕರ್ನಾಟಕ ಉತ್ಸವದ ಶುಭಾಶಯಗಳು."
ದಿನಾಂಕ 17-09-2025 ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ IQAC, ಇತಿಹಾಸ, NSS, ರೇಂಜರ್ಸ್ ಇವುಗಳ ಸಹಯೋಗದಲ್ಲಿ " ಕಲ್ಯಾಣ ಕರ್ನಾಟಕ ಉತ್ಸವ" ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ ಮರಿದೇವಯ್ಯ ರವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಇರುವ ಎಲ್ಲಾ ಗಣ್ಯರು ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ಹಾಗೂ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿಕೊಡಲು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ G. ಅಶೋಕ್ ರವರು ಅನುವು ಮಾಡಿಕೊಟ್ಟರು. ರೇಂಜರ್ಸ್ ಘಟಕದ ಮುಖ್ಯಸ್ಥರಾದ ಡಾ. ಬಿ. ಎನ್. ಮಂಗಳರವರು ಪಥಸಂಚಲನದ ಮೂಲಕ ಧ್ವಜಾರೋಹಣಕ್ಕೆ ಗೌರವ ಸಲ್ಲಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಗೋವಿಂದರಾಜು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ವಿಮೋಚನೆಗಾಗಿ ಹೋರಾಟ ಮಾಡಿದ ಎಲ್ಲಾ ಮಹನೀಯರನ್ನು ಹಾಗೂ ರಜಾಕರ ಹಾವಳಿಯ ಕುರಿತು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೂಪಂ ಸತೀಶ್ ರವರು ಭಾರತ ಸ್ವಾತಂತ್ರ್ಯಗೊಂಡಾಗ ರಾಜ್ಯಗಳು ಹೇಗೆ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳಲ್ಲಿ ವಿಲೀನಗೊಂಡವು ಜೊತೆಗೆ ಹಾಗೆ ಉಳಿದ ಸ್ವಾತಂತ್ರ್ಯ ರಾಜ್ಯಗಳ ಬಗ್ಗೆ ಮತ್ತು ಹೈದರಾಬಾದ್ ಪ್ರಾಂತ್ಯವನ್ನು ಅಪರೇಷನ್ ಪೋಲೋ ಮೂಲಕ ಭಾರತದ ಒಕ್ಕೂಟದಲ್ಲಿ ಹೇಗೆ ವಿಲೀನಗೊಳಿಸಲಾಯಿತು ಎಂಬುವುದರ ಬಗ್ಗೆ ಮಾತನಾಡಿದರು. ಶ್ರೀಮತಿ ಕಾತ್ಯಾಯಿನಿ ಎಂ ಮರಿದೇವಯ್ಯ ರವರು ಬಳ್ಳಾರಿ ಜಿಲ್ಲೆಯ ಹೋರಾಟಗಾರರ ಸಾಧನೆಗಳನ್ನು ಹಾಗೂ 371(J) ಯಿಂದ ಆಗುವ ಸೌಲಭ್ಯಗಳ ಕುರಿತು ತಮ್ಮ ಅಧ್ಯಕ್ಷತೆಯ ನುಡಿಗಳ ಮೂಲಕ ಅರಿವು ಮೂಡಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ರಾಮಲಿಂಗ ಟಿ ಇವರು ವೇದಿಕೆಯ ಗಣ್ಯರನ್ನು ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ರೋಹಿನಾಜ್ ರವರು ಕಾರ್ಯಕ್ರಮ ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭೀಮನಗೌಡ ಪಾಟೀಲ್ ರವರು ವಂದನಾರ್ಪಣೆಯನ್ನು ಮಾಡಿದರು. ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com