Latest News & e-Newsletter

V.V. Sangha's

Smt. A.S.M. College for Women, Ballari.(Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12(B) of the UGC Act 1956

(Accredited by NAAC B+ Grade in IV Cycle with a CGPA of 2.65/4.00 in 2024)

Internal Quality Assurance Cell (IQAC)

Department of Kannada activity

Silver Jubilee Celebration of International Mother Language Day

&

A special talk arranged by the Kannada expert Dr.M. Somashekhar, Associate Professor of Kannada, on occasion.

https://www.facebook.com/share/p/1CVwkPZrCf/

b4729857 d8c7 49cd 8321 999041019b83

d68679f3 fb29 4db2 98c6 bf727b087c3d

invitation

ದಿನಾಂಕ 21-02-2025 ರಂದು ಶ್ರೀಮತಿ ಅಲ್ಲo ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, ಕನ್ನಡ ವಿಭಾಗವು" ಕನ್ನಡ ಸಂಘ"ದ ಅಡಿಯಲ್ಲಿ ವಿಶ್ವ ಮಾತೃಭಾಷೆ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೂಪಂ ಸತೀಶ ರವರು ವಹಿಸಿಕೊಂಡಿದ್ದರು. ಡಾ.ಎo. ಸೋಮಶೇಖರ, ಸಹಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀಮತಿ ಗಾಲಿ ರುಕ್ಮಿಣಮ್ಮ ಚೆಂಗರೆಡ್ಡಿ ಸ್ಮಾರಕ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಬಳ್ಳಾರಿ, ಇವರು ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ, 1999 ರಿಂದ ಯುನೆಸ್ಕೊ ಅನುಮೋದನೆಯಿಂದ ಪ್ರತಿ ವರ್ಷ ವಿಶ್ವ ಮಾತೃಭಾಷೆಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಬಹುಭಾಷೆಗಳನ್ನು ಉತ್ತೇಜಿಸಲು ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಹಾಗೆಯೇ ಕರ್ನಾಟಕದಲ್ಲಿ ನಮ್ಮ ಮಾತೃ ಭಾಷೆಯನ್ನು ಕಟ್ಟಿ ಬೆಳೆಸುವಲ್ಲಿ ಹಲವಾರು ಕವಿಗಳ ಶ್ರಮವಿದೆ ಎಂದು ತಮ್ಮ ಉಪನ್ಯಾಸದ ಮೂಲಕ ತಿಳಿಸಿದರು. ಪ್ರಾಂಶುಪಾಲರಾದ ಡಾ. ದೂಪo ಸತೀಶ ರವರು ಹೆಚ್ಚು ಭಾಷೆಗಳಿಗೆ ಲಿಪಿ ಇಲ್ಲದೆ ಇರುವುದರಿಂದ ಕಣ್ಮರೆಯಾಗುತ್ತಿವೆ. ಎಲ್ಲಾ ಭಾಷೆಗಳನ್ನು ಗೌರವಿಸುವ ಕರ್ತವ್ಯ ನಮ್ಮ ಯುವ ಪೀಳಿಗೆಯ ಮೇಲಿದೆ ಎಂದು ತಮ್ಮ ಅಧ್ಯಕ್ಷತೆಯ ನುಡಿಗಳ ಮೂಲಕ ವಿದ್ಯಾರ್ಥಿನಿಯರಿಗೆ ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುವರ್ಣಮ್ಮ ಡಿ ಇವರು ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಜೆ. ಸತೀಶ ರವರು ವಂದಿಸಿದರು.ಬಿ.ಎ. ವಿಭಾಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ನಿಯಾದ ಚೈತನ್ಯರವರು ಅತಿಥಿಗಳ ಪರಿಚಯವನ್ನು ಮಾಡಿದರು. ಕಾರ್ಯಕ್ರಮವನ್ನು ಬಿ.ಎ ವಿಭಾಗದ ಆರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಎಲ್. ಸಹನ ರವರು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ IQAC ಸಂಯೋಜಕರಾದ ಡಾ.ಪಿ.ಜೆ. ಬಿಂದು ರವರು, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಜಿ. ಅಶೋಕ ರವರು ಹಾಗೂ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com