Latest News & e-Newsletter

V.V. Sangha's

Smt. A.S.M. College for Women, Ballari.(Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12B of the UGC Act 1956

(Accredited by NAAC B+ Grade in IV Cycle with a CGPA of 2.65/4.00 in 2024)

For the Latest updates Please visit Karnataka State Akkamahadevi Women's University Website - www.kswu.ac.in 

Internal Quality Assurance Cell (IQAC)

Cultural Association activity

https://www.facebook.com/share/p/1D9wz1EmQx/

Sankranthi Festival Celebration @ College Campus

https://youtu.be/UPMuJEyTKIc?si=lsLBDRgWPtIzqPVs

sankranthi sambrama daily news paper clip

475086961 1318105142838748 7954937241813474162 n 475121565 1318105032838759 988174515662459043 n

 

475276107 1318105176172078 3566930708656850950 n 475385079 1318105489505380 4269982478688686640 n

 

475257657 1318104786172117 4552694209348567888 n 475137114 1318105086172087 7326542249451720067 n

ದಿನಾಂಕ:27-01-2025ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, "ಸಾಂಸ್ಕೃತಿಕ ಸಂಘ"ದ ವತಿಯಿಂದ "ಸಂಕ್ರಾಂತಿ ಸಂಭ್ರಮ" ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವೀರಶೈವ ವಿದ್ಯಾವರ್ಧಕ ಸಂಘದ ಕಛೇರಿಯಿಂದ ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿಗಳಾದ ಯಾಳ್ಪಿಮೇಟಿ ಪಂಪನಗೌಡ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು,ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು, ಕಾಲೇಜು ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ಜೆ.ಎಸ್. ಸುಮಂಗಳ, ಜಿ.ಎo. ಪರ್ವತೀಶ, ಶ್ರೀಮತಿ ಜಿ.ಎಸ್. ಸರ್ವಮಂಗಳ ಇವರನ್ನು ವಿದ್ಯಾರ್ಥಿನಿಯರು ಕಳಸ ಮತ್ತು ಕುಂಭದ ಮೂಲಕ ಸ್ವಾಗತಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯರವರು ಬಾವಿ ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಲನ್ನು ಉಕ್ಕಿಸಿ, ನಮ್ಮ ದೇಶದ ಬೆನ್ನೆಲುಬದ ರೈತರು ಬೆಳೆದ ಭತ್ತದ ರಾಶಿಗೆ ಪೂಜೆಯನ್ನು ಮಾಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್. ರತ್ನ ರವರು ಮುತ್ತೈದೆಯರಿಗೆ ಬಾಗಿನವನ್ನು ಕೊಟ್ಟು, ಎಳ್ಳು-ಬೆಲ್ಲವನ್ನು ಹಂಚಿದರು. ಪ್ರಾಚೀನ ಕಾಲದಿಂದಲೂ ನಮ್ಮ ಹಿರಿಯರು ಆಚರಣೆ ಮಾಡುವಂತಹ ಎಲ್ಲಾ ಹಬ್ಬಗಳನ್ನು ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಈ ಸಂದರ್ಭದಲ್ಲಿ ಸ್ಮರಿಸಿದರು. ವಿದ್ಯಾರ್ಥಿನಿಯರು ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದ ಅಡುಗೆಗಳನ್ನು ಮಾಡಿಕೊಂಡು ಬಂದಿದ್ದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯರು ವಿದ್ಯಾರ್ಥಿನಿಯರು ತಂದ ಅಡುಗೆಗಳ ರುಚಿಯನ್ನು ನೋಡಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com