V.V. Sangha's
Smt. Allum Sumangalamma Memorial College for Women, Ballari. [Estd.: 1969]
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970.
Recognized under sections 2(f) and 12(B) of the UGC Act 1956.
(Accredited by NAAC in IV Cycle)
Internal Quality Assurance Cell (IQAC)
Political Science Department Students Centric Cultural activity conducted on 07.03.2026 @ Seminar Hall.
Social Media Web Link -->https://www.facebook.com/share/p/1MoVBBPzZc/
Please click on the following Web Link for the --> Programme Report
![649171776 1626869665295626 3432969918028361586 n]()
![649116808 1626869588628967 3338854926214258450 n]()
![648759123 1626869631962296 5694886319871039779 n]()
ಶ್ರೀಮತಿ ಅಲ್ಲo ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ದಿನಾಂಕ 07.03.2026ರಂದು "ಸಂವಿಧಾನ ಪೀಠಿಕೆಯ ಗೀತ ಗಾಯನ" ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಧೂಪಂ ಸತೀಶ್ ಅವರು ವಹಿಸಿದ್ದರು. ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಸುಂದರ ಮೂರ್ತಿ T, IQAC ಸಂಯೋಜಕರಾದ ಡಾ. ಸಾಯಿದಾ ತನ್ವೀರ್, ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಟಿ.ಹೆಚ್.ಎಮ್ ಬಸವರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಿಷ್ಟಿ ರುದ್ರಪ್ಪ, ವೀರಶೈವ ವಿದ್ಯಾ ವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಮಾಜಿ ಕಾರ್ಯದರ್ಶಿಗಳಾದ ಶ್ರೀ.ಚೋರನೂರು.ಟಿ.ಕೊಟ್ರಪ್ಪ, ಜಾನಪದ ಗಾಯಕರಾದ ಶ್ರೀ ಎಲ್ಲಪ್ಪ ಬಂಡಾರದಾರ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸುವರ್ಣಮ್ಮ ಡಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಲಿಂಗ ಟಿ, ಹಾಗೂ ಬಿ. ಎ ವಿಭಾಗದ ಎಲ್ಲಾ ಬೋಧಕ ಸಿಬ್ಬಂದಿ ವರ್ಗದವರು ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಉದ್ಘಾಟಕರಾಗಿ ಆಗಮಿಸಿದ ಶ್ರೀ ಟಿ ಹೆಚ್ ಎಂ ಬಸವರಾಜ್ ಅವರು ಸಂವಿಧಾನದ ಪೀಠಿಕೆಯನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಸಿದರು. ಹಾಗೂ ಜನಪದ ಗಾಯಕರಾದ ಎಲ್ಲಪ್ಪ ಬಂಡಾರದ ಇವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಗಾಯನದ ಮೂಲಕ ಎಲ್ಲಾ ವಿದ್ಯಾರ್ಥಿನಿಯರಿಗೆ ಹೇಳಿಕೊಟ್ಟರು. ಕುಮಾರಿ ಮೇಘನಾ ಮತ್ತು ಕುಮಾರಿ ಮುತ್ತಮ್ಮ ಪ್ರಾರ್ಥನೆಯನ್ನು ಹಾಡಿದರು, ಕನ್ನಡ ಉಪನ್ಯಾಸಕರಾದ ಡಾ. ಮಂಗಳ ಬಿ. ಎನ್. ಇವರು ಸರ್ವರನ್ನು ಸ್ವಾಗತಿಸಿದರು, ರಾಜ್ಯಶಾಸ್ತ್ರ ಉಪನ್ಯಾಸಕರಾದ ನಂದಿನಿ ವಿ.ಎ., ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಕನ್ನಡ ಉಪನ್ಯಾಸಕರಾದ ಶ್ರೀ ಸತೀಶ್ ಜಗ್ಗಣ್ಣನವರ್ ವಂದನಾರ್ಪಣೆಯನ್ನು ಸಲ್ಲಿಸಿದರು.