V.V. Sangha's
Smt. A.S.M. College for Women, Ballari.(Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12B of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
For the Latest updates Please visit Karnataka State Akkamahadevi Women's University Website - www.kswu.ac.in
Internal Quality Assurance Cell (IQAC)
NSS-'A' & 'B' Units observed World AIDS Day -2024
![WhatsApp Image 2024 12 02 at 12.47.23 17a81e8c]()
ದಿನಾಂಕ:02-12-2024ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, NSS ಘಟಕಗಳ ಅಡಿಯಲ್ಲಿ"ವಿಶ್ವ ಏಡ್ಸ್ ದಿನಾಚರಣೆ"ಯನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್.ರತ್ನ ರವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಏಡ್ಸ್ ದಿನ ವನ್ನು 1988 ರಿಂದ ಪ್ರತಿ ವರ್ಷ ಡಿಸೆಂಬರ್ 01 ರಂದು ಆಚರಿಸಲಾಗುತ್ತದೆ. HIV ಸೋಂಕಿನ ಹರಡುವಿಕೆಯಿಂದ ಉಂಟಾಗುವ ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದಿಂದ ಮರಣ ಹೊಂದಿದವರಿಗೆ ಸಂತಾಪ ಸೂಚಿಸಲು ಮೀಸಲಾಗಿರುವ ಅಂತರಾಷ್ಟ್ರೀಯ ದಿನವಾಗಿದೆ. NSS ಸ್ವಯಂ ಸೇವಕಿಯರು ಮಹಾವಿದ್ಯಾಲಯದಿಂದ ದುರ್ಗಮ್ಮ ಗುಡಿ ವೃತ್ತದ ವರೆಗೆ ಜಾಥಾ ಕೈಗೊಂಡು, ಘೋಷಣೆಗಳನ್ನು ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ IQAC ಸಂಯೋಜಕರಾದ ಡಾ.ಪಿ.ಜೆ ಬಿಂದು ರವರು, ಇತಿಹಾಸ ವಿಭಾಗದ ಮುಖ್ಯಸ್ಥರಾದ ಟಿ. ರಾಮಲಿಂಗರವರು, ಕನ್ನಡ ವಿಭಾಗದ ಉಪನ್ಯಾಸಕರಾದ ಎ.ಮಹೇಶ ರವರು, NSS ಅಧಿಕಾರಿಗಳು ಹಾಗೂ NSS ಸ್ವಯಂ ಸೇವಕಿಯರು ಭಾಗವಹಿಸಿದ್ದರು.