V.V. Sangha's
Smt. A.S.M. College for Women, Ballari.(Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12B of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
For the Latest updates Please visit Karnataka State Akkamahadevi Women's University Website - www.kswu.ac.in
Internal Quality Assurance Cell (IQAC)
Kannada Sangha & Cultural Association activity - Vachana Gaanamrutha Programme organized on 19.11.2024


![]() |
![]() |
ದಿನಾಂಕ:19-11-2024ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, ಕನ್ನಡ ವಿಭಾಗವು ಕನ್ನಡ ಸಂಘದ ಅಡಿಯಲ್ಲಿ "ವಚನ ಗಾನಾಮೃತ" ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್. ರತ್ನ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.12ನೇ ಶತಮಾನದಲ್ಲಿ ಆರಂಭವಾದ ವಚನ ಸಾಹಿತ್ಯ ಸಮ ಸಮಾಜವನ್ನು ನಿರ್ಮಾಣ ಮಾಡುವುದೇ ಪ್ರಮುಖ ಉದ್ದೇಶವಾಗಿದೆ. ಅಂದಿನ ವಚನಗಳು ಜಾಗತೀಕರಣದಲ್ಲಿರುವ ನಮಗೆ ಇಂದಿಗೂ ಪ್ರಸ್ತುತವಾಗಿವೆ ಎಂದು ತಮ್ಮ ಅಧ್ಯಕ್ಷತೆಯ ನುಡಿಗಳ ಮೂಲಕ ವಿದ್ಯಾರ್ಥಿನಿಯರಿಗೆ ತಿಳಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಮಂಗಳ ಬಿ.ಎನ್ ಇವರು ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕ ನುಡಿಗಳ ಮೂಲಕ ಹೇಳಿದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಚನ್ನಬಸಮ್ಮ, ಚಂದ್ರಲ, ಚೈತನ್ಯ, ಕಣ್ಮಣಿ, ದೀಪ್ತಿ ಮುಂತಾದ ವಿದ್ಯಾರ್ಥಿನಿಯರು ವಚನ ಗಾಯನ ಮಾಡಿದರು. ಈ ಕಾರ್ಯಕ್ರಮದಲ್ಲಿ IQAC ಸಂಯೋಜಕರಾದ ಡಾ.ಪಿ.ಜೆ. ಬಿಂದು ರವರು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗವಿ ಸಿದ್ದಪ್ಪ ಗದಗ ರವರು, ಡಾ.ಕೆ.ಗಂಗಾಧರರವರು, ಕಲಾವಿ ಭಾಗದ ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
![]() |
![]() |