V.V.Sangha's
Smt. A.S.M. College for Women, Ballari. (Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12(B) of the UGC Act 1956
(Accredited by NAAC in IV Cycle)
Internal Quality Assurance Cell (IQAC)
Kannada, Economics Departments in association with
The Bharat Scouts & Guides Rangers Unit Institution Social Resonsibility activity conducted on 18.09.2025
Social Media Web link --> https://www.facebook.com/share/p/1CaNzYfDQa/
Please click on the following web link for the --> ISR Report
ಕನ್ನಡ ವಿಭಾಗ, ಅರ್ಥಶಾಸ್ತ್ರ ವಿಭಾಗ ಮತ್ತುಶ್ರೀಮತಿ ಅಲ್ಲಂ ಸುಮಂಗಳಮ್ಮ ರೇಂಜರ್ಸ್ ಘಟಕದ ಸಂಸ್ಥೆ ಸಾಮಾಜಿಕ ಜವಾಬ್ದಾರಿ ಚಟುವಟಿಕೆ ದಿನಾಂಕ 18.09.2025ರಂದು ನಡೆಯಿತು.
ದಿನಾಂಕ 18-09-2025 ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, ಕನ್ನಡ ವಿಭಾಗ, ಅರ್ಥಶಾಸ್ತ್ರ ವಿಭಾಗ ಮತ್ತು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ರೇಂಜರ್ ಘಟಕದ ಸಹಯೋಗದಲ್ಲಿ ಬಳ್ಳಾರಿ ನಗರದ ಶ್ರೀ ಸೂರ್ಯ ನಿವಾಸ್ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಶೈಕ್ಷಣಿಕ ಸಾoಸ್ಥಿಕ ಸಾಮಾಜಿಕ ಜವಾಬ್ದಾರಿ(Institution Social Responsibility)ಚಟುವಟಿಕೆಯನ್ನು ಮಾಡಲಾಯಿತು. ನಮ್ಮ ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯ ರವರು ಈ ಚಟುವಟಿಕೆಯಲ್ಲಿ ಭಾಗವಹಿಸಿ, ಆಶ್ರಮದ ವೃದ್ಧರಿಗೆ ವಿವಿಧ ಬಗೆಯ ಹಣ್ಣುಗಳನ್ನು ವಿತರಿಸಿದರು. ನಂತರ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಮನುಷ್ಯ ಆಧುನಿಕ ಜೀವನವನ್ನು ಅಳವಡಿಸಿಕೊಂಡು ಸಂಬಂಧಗಳನ್ನು, ಭಾವನೆಗಳನ್ನು ಮರೆತಿರುವುದರಿಂದ ಇಂತಹ ಆಶ್ರಮಗಳು ಹುಟ್ಟಿಕೊಂಡಿವೆ. ಆದರೆ ನೀವು ತಂದೆ-ತಾಯಿಗಳನ್ನು, ಹಿರಿಯರನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದು ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ತಿಳಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೂಪo ಸತೀಶ್ ರವರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುವರ್ಣಮ್ಮ ಡಿ, ಉಪನ್ಯಾಸಕರಾದ ಡಾ. ಮಂಗಳ ಬಿ.ಎನ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ Y. ಪೂರ್ಣಿಮಾ, ಉಪನ್ಯಾಸಕರಾದ ಕಾವೇರಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಜಿ. ಅಶೋಕ್ ರವರು, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಂದರ ಮೂರ್ತಿಯವರು ಮತ್ತು ಬಿ.ಎ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯರು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.