V.V. Sangha's
Smt. A.S.M. College for Women, Ballari.(Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12B of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
For the Latest updates Please visit Karnataka State Akkamahadevi Women's University Website - www.kswu.ac.in
Internal Quality Assurance Cell (IQAC)
Physical Education Department activity
KSAW University Inter Collegiate Chess Tournament held on 05.11.2024
@ Smt.ASM College for Women, Ballari.
Hearty Congratulations to the KSAW University Inter Collegiate Chess Tournament Winners
-- VVS Management, Principal, Staff and Students.

![]() |
![]() |
ದಿನಾಂಕ:05-11-2024ರಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ, ಇವರ ಸಹಯೋಗದೊಂದಿಗೆ 2024-25ನೇ ಸಾಲಿನ ಅಂತರ್ ಮಹಾವಿದ್ಯಾಲಯಗಳ ಚೆಸ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯದ ತಂಡದ ಆಯ್ಕೆ, ಈ ಕಾರ್ಯಕ್ರಮವನ್ನು ಶ್ರೀಮತಿ ಅಲ್ಲo ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್. ರತ್ನ ರವರು ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದರು. ಮಹಮ್ಮದ್ ರಫೀಕ್ ಮತ್ತು ನಾಗರಾಜ ಇವರು ಚೆಸ್ ಪಂದ್ಯಾವಳಿಯ ನಿರ್ಣಯಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯ ರವರು ಚೆಸ್ ಸ್ಪರ್ಧೆ ಮಾನಸಿಕ ಚಟುವಟಿಕೆಯಾಗಿದ್ದು, ವಿದ್ಯಾರ್ಥಿಯನ್ನು ಸಂಪೂರ್ಣ ವ್ಯಕ್ತಿಯಾಗಿ ರೂಪಿಸಬೇಕಾದರೆ ಇಂತಹ ಚಟುವಟಿಕೆಗಳು ಅತ್ಯವಶ್ಯಕವಾಗಿ ಬೇಕಾಗುತ್ತವೆ ಎಂದು ತಮ್ಮ ಅಧ್ಯಕ್ಷತೆಯ ನುಡಿಗಳ ಮೂಲಕ ತಿಳಿಸಿದರು. ಡಾ.ಬಸವರಾಜೇಶ್ವರಿಯವರು ವಂದನಾರ್ಪಣೆ ಕಾರ್ಯಕ್ರಮವನ್ನು ಮಾಡಿದರು. ವಿವಿಧ ಕಾಲೇಜುಗಳಿಂದ 43 ವಿದ್ಯಾರ್ಥಿನಿಯರು ಚೆಸ್ ಸ್ಪರ್ಧಾಳುಗಳಾಗಿ ಭಾಗವಹಿಸಿದ್ದರು. ಇದರಲ್ಲಿ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಥಮ ಬಹುಮಾನವನ್ನು ಗಳಿಸಿಕೊಂಡರು. ಶ್ರೀಮತಿ A. A. ಪಾಟೀಲ್ ಮಹಿಳಾ ಕಾಲೇಜು, ಚಿಕ್ಕೋಡಿ ವಿದ್ಯಾರ್ಥಿನಿಯರು ದ್ವಿತೀಯ ಬಹುಮಾನವನ್ನು, ಹಾಗೂ SJMVS ಕಾಲೇಜು ಹುಬ್ಬಳ್ಳಿ ವಿದ್ಯಾರ್ಥಿನಿಯರು ತೃತಿಯ ಬಹುಮಾನವನ್ನು ಗಳಿಸಿಕೊಂಡರು. ಬಹುಮಾನಗಳನ್ನು ಕಾರ್ಯಕ್ರಮದ ಅಧ್ಯಕ್ಷರು, ಪ್ರಾಂಶುಪಾಲರು, IQAC ಸಂಯೋಜಕರು, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು, ವಿವಿಧ ಕಾಲೇಜುಗಳಿಂದ ಭಾಗವಹಿಸಿದ ಚೆಸ್ ಸ್ಪರ್ಧಾಳುಗಳು ಉಪಸ್ಥಿತರಿದ್ದರು.
![]() |
![]() |



