V.V. Sangha's
Smt. A.S.M. College for Women, Ballari.(Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12B of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
For the Latest updates Please visit Karnataka State Akkamahadevi Women's University Website - www.kswu.ac.in
Internal Quality Assurance Cell (IQAC)
NSS-'A' & 'B' Units - Celebration of 69th Karnataka Rajyotsava on 01.11.2024

ದಿನಾಂಕ:01-11-2024ರಂದು ಶ್ರೀಮತಿ ಅಲ್ಲo ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, NSS ಘಟಕಗಳ ಅಡಿಯಲ್ಲಿ "69ನೇ ಕರ್ನಾಟಕ ರಾಜ್ಯೋತ್ಸವ" ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು ವಹಿಸಿಕೊಂಡಿದ್ದರು. ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಡಾ. ಅರವಿಂದ ಪಾಟೀಲ್ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ, ಕನ್ನಡ ನಾಡು ನುಡಿ, ಕನ್ನಡ ಪರಂಪರೆಯ ಕಲೆ, ಸಂಸ್ಕೃತಿ, ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. ವುoಕಿಮರಿಸಿದ್ದಮ್ಮ ಶಾಲೆ ಮತ್ತು ಫಾರ್ಮಸಿ ಕಾಲೇಜಿನ ಅಧ್ಯಕ್ಷರಾದ ಎಲ್.ಟಿ. ಶೇಖರ್ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯ ರವರು ನಮ್ಮ ಕರುನಾಡು ವಿವಿಧ ಕಲೆಗಳ ತವರಾಗಿ, ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ನಾವು ಜಾಗತೀಕರಣದ ವೇಗದ ಜೊತೆಗೆ ಜೀವನವನ್ನು ಸಾಗಿಸುತಿದ್ದೇವೆ. ಆದ್ದರಿಂದ ಮಾತೃಭಾಷೆಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಮ್ಮ ಅಧ್ಯಕ್ಷತೆ ನುಡಿಗಳ ಮೂಲಕ ತಿಳಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್. ರತ್ನ ರವರು ಅತಿಥಿಗಳನ್ನು ಸ್ವಾಗತಿಸಿದರು. ಹಾಗೂ ಡಾ. ಗೋವಿಂದರಾಜ ರವರು ವಂದನಾರ್ಪಣೆಯನ್ನು ನಿರ್ವಹಿಸಿದರು. NSS ಅಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
![]() |
![]() |
![]() |
![]() |
![]() |
![]() |
![]() |
![]() |