V.V. Sangha's
Smt. A.S.M. College for Women, Ballari.(Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12B of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
For the Latest updates Please visit Karnataka State Akkamahadevi Women's University Website - www.kswu.ac.in
Internal Quality Assurance Cell (IQAC)
A Special Lecture organized by Department of Kannada on 12.11.2024

![]() |
![]() |
ದಿನಾಂಕ:12-11-2024ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, ಕನ್ನಡ ವಿಭಾಗವು "ಕನ್ನಡ ಸಂಘ"ದ ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್. ರತ್ನ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಕೆ.ಎಸ್. ಶಿವಪ್ರಕಾಶ, ಕನ್ನಡ ಉಪನ್ಯಾಸಕರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಇವರು ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ, " ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ರನ್ನನ ಸಾಹಸಭೀಮ ವಿಜಯ" ಎಂಬ ವಿಷಯವನ್ನು ಕುರಿತು ಮಾತನಾಡಿದರು. ಪಂಪ ಪೂರ್ವ ಯುಗದ ಕವಿರಾಜಮಾರ್ಗ, ರನ್ನನ ಪರಿಚಯ, ಭೀಮ ಮತ್ತು ದುರ್ಯೋಧನನ ಯುದ್ಧದ ಪ್ರಸಂಗ, ವೈಶಂಪಾಯನ ಸರೋವರದ ವರ್ಣನೆ, ದುರ್ಯೋಧನನ ಪ್ರಲಾಪ ಪ್ರಸಂಗ ಮುಂತಾದ ವಿಷಯಗಳನ್ನು ಕುರಿತು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಮಹೇಶರವರು ವಿಶೇಷ ಉಪನ್ಯಾಸಕರ ಪರಿಚಯ ಮಾಡಿದರು. ಡಾ. ಮಂಗಳ ಬಿ. ಎನ್. ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಟಿ. ರಾಮಲಿಂಗ ರವರು ಹಾಗೂ B.A ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
![]() |
![]() |