"The Choice you Make Today Determines The outcome of Tomorrow"

ಜಿಲ್ಲಾ ಯುವ ಸಮಾವೇಶ ಕಾರ್ಯಕ್ರಮ-2019

4

“ಆಡು ಮುಟ್ಟದ ಗಿಡವಿಲ್ಲ”. ನೆಹರು ಯುವಕ ಕೇಂದ್ರ ಹಾಗೂ ರಾಷ್ಟೀಯ ಸೇವಾ ಯೋಜನೆ ಮಾಡದ ಕೆಲಸವಿಲ್ಲ- ಶ್ರೀ.ಎಂ.ಎನ್.ನಟರಾಜ್, ಜಿಲ್ಲಾ ಸಮನ್ಯಯ ಅಧಿಕಾರಿ, ನೆಹರು ಯುವಕ ಕೇಂದ್ರ ಬಳ್ಳಾರಿ.   ದಿನಾಂಕ 23.03.2019ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನ ಎನ್.ಎಸ್.ಎಸ್. ಘಟಕಗಳು ಮತ್ತು ಶ್ರೀ ಸಾಯಿರಾಂ ಯುವಕ ಸೇವಾ ಸಂಘ, ಸೋಮಸಮುದ್ರ ಜಂಟಿಯಾಗಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಯುವ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇದಿಕೆ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ. ಅಂಗಡಿ ಶಶಿಕಲಾ ವಹಿಸಿದ್ದರು. ವೇದಿಕೆಯಲ್ಲಿ ಎನ್.ವೈ.ಕೆ. ಬಳ್ಳಾರಿ, ಜಿಲ್ಲಾ ಸಮನ್ವಯ ಅಧಿಕಾರಿ ಶ್ರೀ.ಎಂ.ಎನ್.ನಟರಾಜ್, ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ.ಎಸ್.ವೈ.ತಿಮ್ಮಾರೆಡ್ಡಿ, ಎನ್.ವೈ.ಕೆ.ಕಾರ್ಯಕ್ರಮ ಸಂಘಟಕರು ಅನಿಲ್ ಕುಮಾರ್‍ಕುಪ್ಪಲಿ, ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀ.ಯು.ಸೋಮಶೇಖರ ಮತ್ತು ಶ್ರೀ.ಯು.ಚಂದ್ರಶೇಖರ, ಶ್ರೀ.ಡಿ.ಮಲ್ಲಿಕಾರ್ಜುನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ನೆಹರು ಯುವಕ ಕೇಂದ್ರ, ಬಳ್ಳಾರಿ ಜಿಲ್ಲಾ ಸಮನ್ವಯ ಅಧಿಕಾರಿ ಶ್ರೀ.ಎಂ.ಎನ್.ನಟರಾಜ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಲ್ಲಿಗೆ 88ವರ್ಷಗಳ ಹಿಂದೆ ಇದೇ ಮಾರ್ಚ್ 23ರಂದು ಆಂಗ್ಲರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಅಪ್ರತಿಮ ದೇಶಭಕ್ತರಾದ ಶ್ರೀ ಭಗತ್‍ಸಿಂಗ್, ಶ್ರೀ ಸುಖದೇವ, ಶ್ರೀ ರಾಜಗುರು ಇವರುಗಳನ್ನು ಗಲ್ಲಿಗೇರಿಸಿದ ದಿನವಿದು. ಇದು ಹುತಾತ್ಮರ ದಿನವಿದು. ಈ ದಿನದಂದು ನಾವು ಜಿಲ್ಲಾ ಯುವಸಮಾವೇಶವನ್ನು ಆಯೋಜಿಸಿದ್ದು ಅತಿ ಸೂಕ್ತ ಎಂದು ಹೇಳಿದರು.

    ನಮಗೆ ಸ್ವಾತಂತ್ರ್ಯ ಬಂದಾಗ ನಮ್ಮ ಜನಸಂಖ್ಯೆ 33ಕೋಟಿ ಇತ್ತು. ಆದರೆ ಇಂದು 133 ಕೋಟಿಯಾಗಿದೆ. 75ವರ್ಷಗಳ ಅವಧಿಯಲ್ಲಿ ನಾವು ಸಾಧಿಸಿದ ದೊಡ್ಡ ಸಾಧನೆಯೆಂದರೆ ಮಾನವ ಶಕ್ತಿ ಅಭಿವೃದ್ದಿ, ಇಂದು ಭಾರತದಲ್ಲಿ 45ಕೋಟಿ ಯುವಕರು 15ರಿಂದ 29ವರ್ಷಗಳ ಒಳಗಿನವರು. ಹೀಗಾಗಿ ಇಂದು ಭಾರತ ಯುವಕರ ದೇಶ, ವಿಶ್ವಗುರು, ವಿಶ್ವಶಕ್ತಿಯಾಗಿ ಮಾÀರ್ಪಟ್ಟಿದೆ. ಯಾವ ರೀತಿ ಅಮೇರಿಕವು ತನ್ನ ಯುವಶಕ್ತಿಯಿಂದಲೇ ಜಗತ್ತಿನ ದೊಡ್ಡಣ್ಣ ಎಂದು ಖ್ಯಾತಿ ಪಡೆದಿತ್ತು. ಅದೇ ರೀತಿ 21ನೇ ಶತಮಾನದ ದೊಡ್ಡಣ್ಣನಾಗಿ ನಮ್ಮ ದೇಶವು ಬೆಳೆಯುತ್ತಲಿದೆ. ಯುವಶಕ್ತಿ ಅಣುಶಕ್ತಿಯಂತೆ ಭಯಂಕರ ಇಂಥ ಯುವಶಕ್ತಿಯನ್ನು ಸರಿದಾರಿಯಲ್ಲಿ ತೊಡಗಿಸಿಕೊಂಡರೆ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು. ಯುವಕರ ಪಾತ್ರ ಅವಿಸ್ಮರಣೀಯ ಅದು ಗಡಿಕಾಯುವ ಕೆಲಸವಿರಬಹುದು, ದೇಶ ಕಟ್ಟುವ ಯಾವುದೇ ಚಟುವಟಿಕೆಯಿರಲಿ ಯುವಕರು ಮುಂಚೂಣಿಯಲ್ಲಿರಬೇಕೆಂದು ಹೇಳಿದರು.  ಎನ್.ಎಸ್.ಎಸ್ ಮತ್ತು ಎನ್.ವೈ.ಕೆ. ಒಂದು ನಾಣ್ಯದ ಎರಡು ಮುಖವಿದ್ದಂತೆ. ಎನ್.ಎಸ್.ಎಸ್. ಶಾಲಾ-ಕಾಲೇಜುಗಳ ಮೆಟ್ಟಿಲು ಏರಿದಂತೆ ಯುವಕ-ಯುವತಿಯರನ್ನು ಕೇಂದ್ರೀಕರಿಸಿದರೆ, ಎನ್.ವೈ.ಕೆ. ಶಾಲಾ-ಕಾಲೇಜಿನಿಂದ ಹೊರಗುಳಿದ, ಹಳ್ಳಿಯ ಮತ್ತು ಪಟ್ಟಣದ ಅವಿದ್ಯಾರಂತರನ್ನು ಕೇಂದ್ರೀಕರಿಸಿದೆ. ಅವರನ್ನು ಸಂಘಟಿಸಿ ಒಂದು ಸಂಸ್ಥೆಯ ಅಡಿಯಲ್ಲಿ ಒಂದುಗೂಡಿಸಿ ದೇಶ, ಭಾಷೆ, ನಾಗರೀಕತೆಯನ್ನು ಕಟ್ಟುವ ವಿಚಾರದಲ್ಲಿ ಅವರನ್ನು ಬಳಸಿಕೊಳ್ಳಬೇಕೆಂಬ ಏಕೈಕ ಉದ್ದೇಶದಿಂದ ಎನ್.ವೈ.ಕೆ ಜನ್ಮತಾಳಿತು. ಅಂದಿನ ಪ್ರಧಾನಮಂತ್ರಿ ದಿವಂಗತ ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ತಂದೆಯ ಹಾಗೂ ಪ್ರಥಮ ಪ್ರಧಾನಮಂತ್ರಿ ದಿವಂಗತ ಶ್ರೀ ಪಂಡಿತ್ ಜವಾಹರ್‍ಲಾಲ್ ನೆಹರು ಇವರ ನೆನಪಿಗೋಸ್ಕರ ಯುವಕ ಕೇಂದ್ರವನ್ನು ಎನ್.ವೈ.ಕೆ. ಎಂದು ನಾಮಕರಣ ಮಾಡಿದರು. ಇಂದು ಭಾರತದಾದ್ಯಂತ 720 ಜಿಲ್ಲೆಗಳಲ್ಲಿ ಎನ್.ವೈ.ಕೆ ಕೆಲಸ ಮಾಡುತ್ತ ಬಂದಿದೆ ಎಂದು ಹೇಳಿದರು.  ಎನ್.ವೈ.ಕೆ ಅಂಗಸಂಸ್ಥೆಗಳ ಬಗ್ಗೆ ಹೇಳಿದರು. ಎನ್.ವೈ.ಕೆಯು ಇನ್ನು ಮುಂದೆ ಹಳ್ಳಿಗಳನ್ನು ಕೇಂದ್ರೀಕರಿಸಿ “ಮರಳಿ ಹಳ್ಳಿಗೆ” ಎಂಬ ಕಾರ್ಯಕ್ರಮವನ್ನು ಆಯೋಜಿಸಬೇಕೆಂಬ ಯೋಚನೆ ಮಾಡುತ್ತಿದೆ. ಏಕೆಂದರೆ ಹಳ್ಳಿಗಳು ಇಂದು ಖಾಲಿ ಆಗುತ್ತಲಿವೆ, ಕೃಷಿ ಚಟುವಟಿಕೆಗಳು ನಿಲ್ಲುವ ಹಂತಕ್ಕೆ ಬಂದಿವೆ. ಹಳ್ಳಿಗರು ಪಟ್ಟಣದ ಕಡೆ ಮುಖ ಮಾಡುತ್ತಿದ್ದಾರೆ. 2025ರ ಸುಮಾರಿಗೆ ಹಳ್ಳಿಗಳು ನಿರ್ಜೀವಗಳಾಗುತ್ತವೆ ಎಂಬ ಎಚ್ಚರಿಕೆ ಮಾತನ್ನು ಆಡಿದರು. ಹಳ್ಳಿಯ ಕ್ರೀಡೆಗಳು ನಿರ್ಜೀವವಾಗಿವೆ. ಯಾವ ರೀತಿ ಆಲದ ಮರದ ಕೆಳಗಡೆ ಯಾವ ಹುಲ್ಲು ನಾಟುವುದಿಲ್ಲವೋ ಹಾಗೆಯೇ ಕ್ರಿಕೆಟಿನ ಬಾರಟೆಯಲ್ಲಿ ಹಳ್ಳಿಯ ಎಲ್ಲಾ ಆಟಗಳು ನಶಿಸುತ್ತಾ ನಡೆದಿವೆ. ಹೀಗಾಗಿ ಎನ್.ವೈ.ಕೆ ಆ ಆಟಗಳ ಉತ್ತೇಜನಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.  ದೇಶ ಕಟ್ಟುವ ಕೆಲಸದಲ್ಲಿ ಅಕ್ಷರಸ್ಥರು, ಅನಕ್ಷರಸ್ಥರು ಎಲ್ಲರೂ ಭಾಗಿಯಾಗಬೇಕು. “ಯಾವ ರೀತಿ ಸಾಲುಮರದ ತಿಮ್ಮಕ್ಕ ಅನಕ್ಷರಸ್ಥಳಾಗಿದ್ದರೂ, ಗ್ರಾಮೀಣ ಮಹಿಳೆಯಾಗಿದ್ದರೂ ದೇಶಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡರು’ ಎಂದು ಹೇಳಿ ಯುವತಿಯರನ್ನು ಹುರುದುಂಬಿಸಿದರು.

ಇದೇ ಸಂದರ್ಭದಲ್ಲಿ ಮತದಾನದ ಪ್ರಾಮುಖ್ಯತೆಯನ್ನು ಹೇಳಿ ಯಾವ ಮತದಾರರು ಕೂಡ ಮತದಾನದಿಂದ ದೂರ ಉಳಿಯಬಾರದು ಎಂದು ವಿದ್ಯಾರ್ಥಿಗಳಿಗೆ ಉಪದೇಶಿಸಿದರು.  ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ವೈ.ತಿಮ್ಮಾರೆಡ್ಡಿಯವರು ತಮ್ಮ ಹಳ್ಳಿಗಳಲ್ಲಿ ಯುವಕ ಸಂಘವನ್ನು ಸ್ಥಾಪಿಸ ಸಾಕಷ್ಟು ಚಟುವಟಿಕೆಗಳನ್ನು ಆಯೋಜಿಸಿ ತಮ್ಮ ಊರಿನ ಅಭಿವೃದ್ದಿಗಾಗಿ ಯುವಕ ಸಂಘಗಳು ಪ್ರಮುಖ ಪಾತ್ರವನ್ನು ನಿರ್ವಹಿಸಿದವು ಎಂದು ನೆನಪಿಸಿಕೊಂಡರು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಅಂಗಡಿ ಶಶಿಕಲಾ ಇವರು ಈ ರೀತಯ ಯುವಕ ಕೇಂದ್ರಗಳಿಂದ ಸಂಸ್ಕಾರ, ಸಂಸ್ಕøತಿ ಬೆಳೆಯುವ ಕೆಲಸವಾಗಲಿ, ನಮ್ಮ ಸಂಸ್ಕøತಿ ಮತ್ತು ಸಂಸ್ಕಾರಕ್ಕೆ ಮನೆಯೇ ಮೊದಲ ಪಾಠಶಾಲೆಯೆಂದು ಹೇಳಿದರು.   ಕಾರ್ಯಕ್ರಮದ ಆರಂಭದಲ್ಲಿ ದಿನಾಂಕ 22.3.2019ರಂದು ಕರ್ನಾಟಕ ಸರ್ಕಾರದ ಪೌರಾಡಳಿತ ಸಚಿವರಾದ ಶ್ರೀ.ಸಿ.ಎಸ್.ಶಿವಳ್ಳಿಯವರ ನಿಧನಕ್ಕೆ ಸಂತಾಪವನ್ನು ಸೂಚಿಸಿ, ಅವರ ಆತ್ಮಕ್ಕೆ ಶಾಂತಿಯನ್ನು ಕೋರಲು ಎರಡು ನಿಮಿಷದ ಮೌನಾಚರಣೆಯನ್ನು ಆಚರಿಸಲಾಯಿತು.    ಶ್ರೀ ಅನಿಲ್ ಕುಮಾರ್ ಕುಪ್ಪಲಿ ಕಾರ್ಯಕ್ರಮ ಸಂಘಟಕರು ಎನ್.ವೈ.ಕೆ., ಬಳ್ಳಾರಿ ಇವರು ಮಾತನಾಡಿದರು. ಕಾರ್ಯಕ್ರಮವನ್ನು ಕು.ಶ್ವೇತರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶ್ರೀ.ಯು.ಸೋಮಶೇಖರ್ ಇವರು ಪ್ರಾಸ್ತಾವಿಕ ಮತ್ತು ಸ್ವಾಗತ ನುಡಿಗಳನ್ನು ಹೇಳಿದರು. ಶ್ರೀ ಸಾಯಿರಾಂ ಯುವಕ ಸೇವಾಸಂಘ, ಸೋಮಸಮುದ್ರ ಕಾರ್ಯದರ್ಶಿಗಳಾದ ಶ್ರೀ ರಾಮಚಂದ್ರ ಇವರು ಸಹ ಮಾತನಾಡಿದರು.  ಶ್ರೀ ಡಿ.ಮಲ್ಲಿಕಾರ್ಜುನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಅಮರೇಶ ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಂಪರ್ಕ ವಿಳಾಸ

Smt. Allum Sumangalamma Memorial
College for Women
Sri Togari Veerappanavara
Datti Avarana,
Allum Sumangalamma Road,
1st Cross, Gandhi Nagar 1st,
Ballari 583103
08392-256756
08392-257624
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.

Please publish modules in offcanvas position.